ನಮಸ್ಕಾರ, ಪ್ರಿಯ ಅಭ್ಯರ್ಥಿಗಳೇ.
ಇಂದು (BNPM ನೇಮಕಾತಿ 2026) ನಾವು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (BNPMIPL) ಸಂಸ್ಥೆಯಿಂದ ಬಿಡುಗಡೆಯಾಗಿರುವ ನೇಮಕಾತಿ 2026ಅಧಿಸೂಚನೆಯ ಕುರಿತು ವಿವರವಾಗಿ ಚರ್ಚಿಸೋಣ. ಈ ಮಾಹಿತಿಯು ನಿಮ್ಮ ಉದ್ಯೋಗಾಕಾಂಕ್ಷೆಗೆ ಸಹಕಾರಿಯಾಗಲಿ ಎಂದು ಭಾವಿಸುತ್ತೇನೆ.
📌 ಸಂಸ್ಥೆಯ ಪರಿಚಯ
BANK NOTE PAPER MILL INDIA PRIVATE LIMITED (BNPMIPL) ಇದು ಭಾರತ ಸರ್ಕಾರದ ಒಡೆತನದ SPMCIL (Security Printing and Minting Corporation of India Limited) ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ (RBI) ಅಂಗಸಂಸ್ಥೆಯಾದ BRBNMPL ಇವುಗಳ ಜಂಟಿ ಉದ್ಯಮವಾಗಿದೆ. ಈ ಸಂಸ್ಥೆಯು ಭಾರತದ ಕರೆನ್ಸಿ ನೋಟುಗಳಿಗೆ ಬೇಕಾದ ವಿಶೇಷ ಕಾಗದವನ್ನು ಉತ್ಪಾದಿಸುವ ಜವಾಬ್ದಾರಿಯನ್ನು ಹೊಂದಿದೆ.
📅 ಅಧಿಸೂಚನಾ ದಿನಾಂಕ: 06 ಮಾರ್ಚ್ 2026
📰 ಉದ್ಯೋಗ ವಾರ್ತಾಪತ್ರಿಕೆಯಲ್ಲಿ ಪ್ರಕಟಣೆ: 21 ಮಾರ್ಚ್ 2026
🗓️ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 11 ಏಪ್ರಿಲ್ 2026 (ಸಂಜೆ 5:00 ಗಂಟೆಯವರೆಗೆ)
📍 ಕಾರ್ಯಸ್ಥಳ: ಮೈಸೂರು, ಕರ್ನಾಟಕ
| ಹುದ್ದೆ ಹೆಸರು | ಹುದ್ದೆಗಳು |
| Assistant Manager (Finance & Accounts) | 02 (1 UR, 1 OBC) |
| Assistant Manager (Materials Management) | 02 (UR) |
| Assistant Manager (Civil) | 02 (UR) |
| ಒಟ್ಟು | 06 ಹುದ್ದೆಗಳು |
⚠️ ಗಮನಿಸಿ: ಈ ನೇಮಕಾತಿಯು ಕೇವಲ ಆಫ್ಲೈನ್ ಮಾದರಿಯಲ್ಲಿರುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
🎓 ಅರ್ಹತಾ ಮಾನದಂಡಗಳು/Eligibility criteria
👉 ಈ ಹುದ್ದೆಗಳಿಗೆ ಅಗತ್ಯವಾದ ವಿದ್ಯಾರ್ಹತೆ, ಅನುಭವ, ವಯೋಮಿತಿ ಹಾಗೂ ಇತರೆ ವಿವರಗಳು ಕೆಳಗಿನಂತೆ ನೀಡಲಾಗಿದೆ.
| ಕ್ರಮ ಸಂಖ್ಯೆ | ಹುದ್ದೆ ಹೆಸರು | ಖಾಲಿ ಹುದ್ದೆಗಳು | ಗರಿಷ್ಠ ವಯಸ್ಸು | ಶಿಕ್ಷಣ ಅರ್ಹತೆ | ಅನುಭವ |
| 01 | ಅಸಿಸ್ಟೆಂಟ್ ಮ್ಯಾನೇಜರ್ (Finance & Accounts) | 02 (01 UR, 01 OBC) | 32 ವರ್ಷ | B.Com / BBA (First Class) + CA (ICAI) / CMA (ICMAI) | ಅನುಭವ ಅಗತ್ಯವಿಲ್ಲ |
| 02 | ಅಸಿಸ್ಟೆಂಟ್ ಮ್ಯಾನೇಜರ್ (Materials Management) | 02 (UR) | 32 ವರ್ಷ | Mechanical / Electrical / EEE ಇಂಜಿನಿಯರಿಂಗ್ (60% ಅಂಕಗಳು) | ಅನುಭವ ಅಗತ್ಯವಿಲ್ಲ |
| 03 | ಅಸಿಸ್ಟೆಂಟ್ ಮ್ಯಾನೇಜರ್ (Civil) | 02 (UR) | 32 ವರ್ಷ | Civil Engineering (B.E / B.Tech) (60% ಅಂಕಗಳು) | ಅನುಭವ ಅಗತ್ಯವಿಲ್ಲ |
ಪ್ರಮುಖ ಮಾಹಿತಿ
- 👉 ಎಲ್ಲಾ ಹುದ್ದೆಗಳಿಗೂ ಗರಿಷ್ಠ ವಯಸ್ಸು 32 ವರ್ಷ ಮಾತ್ರ
- ಒಟ್ಟು 6 ಹುದ್ದೆಗಳು ಲಭ್ಯವಿದ್ದು, ಅದರಲ್ಲಿ UR – 5 ಮತ್ತು OBC – 1 ಹುದ್ದೆ ಇದೆ
ಶೈಕ್ಷಣಿಕ ಅರ್ಹತೆ – 60% ಮಾರ್ಕ್ಸ್ ಮುಖ್ಯ!
ಎಲ್ಲಾ ಹುದ್ದೆಗಳಿಗೂ ಕನಿಷ್ಠ 60% ಅಂಕಗಳು (First Class) ಇರಲೇಬೇಕು. ಇದು ಕಡ್ಡಾಯ!
🔹Finance & Accounts ಹುದ್ದೆಗೆ:
- B.Com ಅಥವಾ BBA ಪದವಿ – ಫರ್ಸ್ಟ್ ಕ್ಲಾಸ್ (60%+) ಇರಬೇಕು
- ಜೊತೆಗೆ CA (ICAI) ಅಥವಾ CMA (ICMAI) ಪಾಸ್ ಆಗಿರಬೇಕು
- ಎರಡೂ ಕಂಡಿಷನ್ಸ್ ಫುಲ್ ಆಗಬೇಕು! ✅
🔹 Materials Management ಹುದ್ದೆಗೆ:
- Mechanical / Electrical / EEE ನಲ್ಲಿ ಇಂಜಿನಿಯರಿಂಗ್ ಡಿಗ್ರಿ
- 60% ಮಾರ್ಕ್ಸ್ ಕನಿಷ್ಠ ಇರಲೇಬೇಕು
- Supply Chain / Logistics ತಿಳಿದಿದ್ದರೆ ಪ್ಲಸ್ ಪಾಯಿಂಟ್ 🎁
🔹 Civil ಹುದ್ದೆಗೆ:
- Civil Engineering ನಲ್ಲಿ B.E / B.Tech
- 60% ಮಾರ್ಕ್ಸ್ ಕಡ್ಡಾಯ
- MBA ಇದ್ದರೆ ಆದ್ಯತೆ ಸಿಗಬಹುದು
📌 ನೆನಪಿಡಿ: “First Class” ಅಂದ್ರೆ ಸಾಮಾನ್ಯವಾಗಿ 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳು. ನಿಮ್ಮ ಮಾರ್ಕ್ಸ್ ಕಾರ್ಡ್ನಲ್ಲಿ ಇದು ಕ್ಲಿಯರ್ ಆಗಿ ತೋರಿಸಬೇಕು
👉 Freshers ಕೂಡ ಅರ್ಜಿ ಹಾಕಬಹುದು, ಯಾವುದೇ ಹುದ್ದೆಗೂ ಕಾರ್ಯಾನುಭವ (Experience) ಅಗತ್ಯವಿಲ್ಲ!
ನೀವು ಇತ್ತೀಚೆಗೆ CA/CMA ಪಾಸ್ ಆಗಿದ್ರೆ, ಅಥವಾ ಇಂಜಿನಿಯರಿಂಗ್ ಮುಗಿಸಿದ್ರೆ, ಈಗಲೇ ಅರ್ಜಿ ಹಾಕಿ
👉 ಸರ್ಕಾರಿ ಸಂಬಂಧಿತ ಸಂಸ್ಥೆಯಲ್ಲಿ ಉತ್ತಮ ವೇತನದ ಉದ್ಯೋಗ ಅವಕಾಶ
ವಯೋಮಿತಿ
- ಗರಿಷ್ಠ ವಯಸ್ಸು: 32 ವರ್ಷಗಳು (11 ಏಪ್ರಿಲ್ 2026 ರಂತೆ)
- ವಯೋಮಿತಿ ಸಡಿಲಿಕೆ:
- OBC ವರ್ಗದ ಅಭ್ಯರ್ಥಿಗಳಿಗೆ: 3 ವರ್ಷಗಳು
- PwBD ಅಭ್ಯರ್ಥಿಗಳಿಗೆ: 10 ವರ್ಷಗಳು
- ಮಾಜಿ ಸೈನಿಕರು: ಸರ್ಕಾರದ ನಿಯಮಗಳ ಪ್ರಕಾರ
👉 ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ನೋಟಿಫಿಕೇಶನ್ ತಪ್ಪದೇ ಓದಿ.
💰 ಅರ್ಜಿ ಶುಲ್ಕ
| ವರ್ಗ | ಶುಲ್ಕ |
| General / OBC | ₹800 |
| SC / ST / PwBD / Ex-Servicemen | ₹0 |
👉 ಪಾವತಿ ವಿಧಾನ:
- ಅರ್ಜಿ ಶುಲ್ಕವನ್ನು ಡಿಮಾಂಡ್ ಡ್ರಾಫ್ಟ್ (DD) ಅಥವಾ ಬ್ಯಾಂಕರ್ಸ್ ಚೆಕ್ ಮೂಲಕ ಮಾತ್ರ ಪಾವತಿಸಬೇಕು.
- DD/ಚೆಕ್ ಅನ್ನು “BNPM Recruitment Account” ಹೆಸರಿನಲ್ಲಿ, ಮೈಸೂರು ನಲ್ಲಿ ಪಾವತಿಯಾಗುವಂತೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ನಿಂದ ಪಡೆಯಬೇಕು.
- ಆನ್ಲೈನ್ ಪೇಮೆಂಟ್ (UPI/ನೆಟ್ ಬ್ಯಾಂಕಿಂಗ್) ಸೌಲಭ್ಯ ಲಭ್ಯವಿಲ್ಲ.
💵 ವೇತನ ಮತ್ತು ಸೌಲಭ್ಯಗಳು
- ವೇತನ ಮಟ್ಟ: Level 8 (7ನೇ CPC ಪ್ರಕಾರ)
- ಮೂಲ ವೇತನ: ₹52,000/- ಪ್ರತಿ ತಿಂಗಳು
- ಹೆಚ್ಚುವರಿ ಸೌಲಭ್ಯಗಳು:
- Dearness allowence(DA) – DA @ 60% at present
- House rent allowences(HRA) – 20%(on Basic Pay)
- Provident Fund (PF),Gratuity
- ವೈದ್ಯಕೀಯ ಭತ್ಯೆ ಮತ್ತು ಮಕ್ಕಳ ಶಿಕ್ಷಣ ಸೌಲಭ್ಯ
- ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ (Performance Incentive)
- Canteen facility
- Washing Allowance
- Furnishing Allowance
📝 ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಯು ಎರಡು ಹಂತಗಳ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ:
ಹಂತ 1: ಲಿಖಿತ ಪರೀಕ್ಷೆ
- ಮಾದರಿ: ಆಬ್ಜೆಕ್ಟಿವ್ ಪ್ರಕಾರದ ಬಹು ಆಯ್ಕೆಯ ಪ್ರಶ್ನೆಗಳು (MCQ)
- ಮಾಧ್ಯಮ: ಇಂಗ್ಲಿಷ್ ಭಾಷೆ ಮಾತ್ರ
- ಒಟ್ಟು ಪ್ರಶ್ನೆಗಳು: 80
- ಒಟ್ಟು ಅಂಕಗಳು: 80
- ಸಮಯ: 90 ನಿಮಿಷಗಳು
ಪರೀಕ್ಷಾ ವಿಷಯಗಳು ಮತ್ತು ಅಂಕಗಳ ವಿಭಜನೆ:
| ವಿಭಾಗ | ವಿಷಯಗಳು | ಪ್ರಶ್ನೆಗಳು | ಅಂಕಗಳು |
| ಭಾಗ – A (Non-Technical) | Logical Reasoning, Quantitative Aptitude, English Language | 30 | 30 |
| ಭಾಗ – B (Technical) | Professional Knowledge | 50 | 50 |
| ಒಟ್ಟು | 80 | 80 |
👉 ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
📌 ಗಮನಿಸಿ: ತಾಂತ್ರಿಕ ವಿಷಯಗಳು (Professional Knowledge) ಹೆಚ್ಚು ಅಂಕಗಳನ್ನು ಹೊಂದಿರುವುದರಿಂದ, ಈ ವಿಭಾಗದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದು ಅಗತ್ಯ.
ಹಂತ 2: ವೈಯಕ್ತಿಕ ಸಂದರ್ಶನ (Personal Interview)
- ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
- ಅಂತಿಮ ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಒಟ್ಟು ಪ್ರದರ್ಶನದ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ.
📍 ಪರೀಕ್ಷಾ ಕೇಂದ್ರಗಳು:
- ಬೆಂಗಳೂರು ಅಥವಾ ಮೈಸೂರು (ಅಭ್ಯರ್ಥಿಯ ಆಯ್ಕೆಯಂತೆ)
📮 ಅರ್ಜಿ ಸಲ್ಲಿಸುವ ವಿಧಾನ (ಆಫ್ಲೈನ್ ಮಾತ್ರ)
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಳಕಂಡ ಹಂತಗಳನ್ನು ಅನುಸರಿಸಿ:
- ಅರ್ಜಿ ನಮೂನೆ ಡೌನ್ಲೋಡ್: ಅಧಿಕೃತ ವೆಬ್ಸೈಟ್ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಭರ್ತಿ ಮಾಡುವಿಕೆ: A4 ಗಾತ್ರದ ಕಾಗದದಲ್ಲಿ ಅರ್ಜಿಯನ್ನು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ಭರ್ತಿ ಮಾಡಿ.
- ದಾಖಲೆಗಳ ಲಗತ್ತಿಸುವಿಕೆ:
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಛಾಯಾಚಿತ್ರ
- ಎಲ್ಲಾ ಶೈಕ್ಷಣಿಕ ಮತ್ತು ವೃತ್ತಿಪರ ಪ್ರಮಾಣಪತ್ರಗಳ ಸ್ವಯಂ-ದೃಢೀಕೃತ ಪ್ರತಿಗಳು
- ಅರ್ಜಿ ಶುಲ್ಕದ ಡಿಮಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್ (ಅನ್ವಯಿಸಿದರೆ)
- ಜಾತಿ/ವಯೋಮಿತಿ ಸಡಿಲಿಕೆ ಪ್ರಮಾಣಪತ್ರಗಳು (ಅನ್ವಯಿಸಿದರೆ)
4. ಕಳುಹಿಸುವ ವಿಳಾಸ:
The Chief General Manager (F&A)
Bank Note Paper Mill India Pvt. Ltd.
Administration Building
Note Mudran Nagar
Mysuru – 570003
✅ ಸಲಹೆ: ಅರ್ಜಿಯನ್ನು Register post ಅಥವಾ Speed post ಮೂಲಕ ಕಳುಹಿಸಿ ಮತ್ತು ಅಂಚೆ ಚೀಟಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ.
⚠️ ಮುಖ್ಯ ಸೂಚನೆಗಳು ಮತ್ತು ಎಚ್ಚರಿಕೆಗಳು
❌ ಅಪೂರ್ಣ ಮಾಹಿತಿ ಅಥವಾ ದಾಖಲೆಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
❌ ನಿಗದಿತ ಕೊನೆಯ ದಿನಾಂಕದ ನಂತರ ತಲುಪಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
❌ ಕೇವಲ ಆಫ್ಲೈನ್ ಅರ್ಜಿಗಳು ಮಾತ್ರ ಸ್ವೀಕಾರಾರ್ಹ; ಆನ್ಲೈನ್/ಇಮೇಲ್ ಮೂಲಕ ಕಳುಹಿಸಿದ ಅರ್ಜಿಗಳು ಮಾನ್ಯವಾಗಿರುವುದಿಲ್ಲ.
✅ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಾಗ ಮೂಲ ಗುರುತಿನ ಚೀಟಿ (Aadhaar/PAN/Passport) ಕಡ್ಡಾಯವಾಗಿ ತರಬೇಕು.
✅ ಅರ್ಜಿಯಲ್ಲಿ ನೀಡಲಾದ ಮಾಹಿತಿಯು ನಿಜವಾಗಿರಬೇಕು; ಸುಳ್ಳು ಮಾಹಿತಿ ನೀಡಿದರೆ ಅರ್ಜಿಯನ್ನು ರದ್ದುಪಡಿಸಲಾಗುತ್ತದೆ ಮತ್ತು ಕಾನೂನು ಕ್ರಮ ಜರುಗಿಸಬಹುದು.
🎯 ಸಂಕ್ಷಿಪ್ತ ಸಾರಾಂಶ
| ವಿಷಯ | ವಿವರ |
| ಸಂಸ್ಥೆ | BNPMIPL (SPMCIL & RBI ಜಂಟಿ ಉದ್ಯಮ) |
| ಹುದ್ದೆ | ಅಸಿಸ್ಟೆಂಟ್ ಮ್ಯಾನೇಜರ್ (Finance & Accounts),(Materials Management)(Civil) |
| ಒಟ್ಟು ಹುದ್ದೆಗಳು | 06 |
| ಅರ್ಹತೆ | B.Com/BBA (First Class) + CA/CMA
Mechanical / Electrical / EEE Civil Engineering (B.E / B.Tech) |
| ಅನುಭವ | ಅಗತ್ಯವಿಲ್ಲ (Freshers ಅರ್ಹರು) |
| ವಯೋಮಿತಿ | ಗರಿಷ್ಠ 32 ವರ್ಷ (11.04.2026ಕ್ಕೆ) |
| ಅರ್ಜಿ ಶುಲ್ಕ | ₹800 (General/OBC), ಉಚಿತ (Reserved) |
| ಆಯ್ಕೆ ಪ್ರಕ್ರಿಯೆ | ಲಿಖಿತ ಪರೀಕ್ಷೆ + ಸಂದರ್ಶನ |
| ಅರ್ಜಿ ವಿಧಾನ | ಆಫ್ಲೈನ್ ಮಾತ್ರ |
| ಕೊನೆಯ ದಿನಾಂಕ | 11 ಏಪ್ರಿಲ್ 2026 |
💡 ಅಭ್ಯರ್ಥಿಗಳಿಗೆ ಸಲಹೆಗಳು
- ತಾಂತ್ರಿಕ ಜ್ಞಾನಕ್ಕೆ ಆದ್ಯತೆ ನೀಡಿ: ಪರೀಕ್ಷೆಯಲ್ಲಿ 50/80 ಅಂಕಗಳು Professional Knowledge ನಿಂದ ಬರುವುದರಿಂದ, ಖಾತೆಶಾಸ್ತ್ರ, ಹಣಕಾಸು ನಿರ್ವಹಣೆ, ತೆರಿಗೆ ಕಾನೂನುಗಳು ಮತ್ತು ಆಡಿಟಿಂಗ್ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ.
- ಸಮಯ ನಿರ್ವಹಣೆ ಅಭ್ಯಾಸ: 90 ನಿಮಿಷಗಳಲ್ಲಿ 80 ಪ್ರಶ್ನೆಗಳನ್ನು ಉತ್ತರಿಸಬೇಕಾದ್ದರಿಂದ, ಪ್ರತಿ ಪ್ರಶ್ನೆಗೆ ಸರಾಸರಿ 1 ನಿಮಿಷಕ್ಕಿಂತ ಕಡಿಮೆ ಸಮಯ ವಿನಿಯೋಗಿಸುವ ಅಭ್ಯಾಸ ಮಾಡಿ.
- ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ: ಆಫ್ಲೈನ್ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶವಿಲ್ಲ. ಹೀಗಾಗಿ, ಮೊದಲೇ ಡ್ರಾಫ್ಟ್ ತಯಾರಿಸಿ, ನಂತರ ಅಂತಿಮ ಪ್ರತಿಯನ್ನು ಭರ್ತಿ ಮಾಡಿ.
- ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ: ಎಲ್ಲಾ ಪ್ರಮಾಣಪತ್ರಗಳ ಸ್ವಯಂ-ದೃಢೀಕೃತ ಪ್ರತಿಗಳು, ಫೋಟೋ ಮತ್ತು ಸಹಿಯನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಿ.
- ಕೊನೆಯ ದಿನಾಂಕಕ್ಕೆ ಮುನ್ನವೇ ಕಳುಹಿಸಿ: ಅಂಚೆ ಸೇವೆಯ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ಕೊನೆಯ ದಿನಾಂಕಕ್ಕಿಂತ ಕನಿಷ್ಠ 3-4 ದಿನಗಳ ಮುಂಚಿತವಾಗಿ ಅರ್ಜಿಯನ್ನು ಕಳುಹಿಸಿ.
🔗 ಉಪಯುಕ್ತ ಲಿಂಕ್ಗಳು
🙏 ಅಂತಿಮ ಮಾತು:
ಪ್ರಿಯ ಅಭ್ಯರ್ಥಿಗಳೇ, ಈ ನೇಮಕಾತಿಯು Freshers ಮತ್ತು ಅನುಭವಿಗಳಿಗೂ ಸಮಾನ ಅವಕಾಶವನ್ನು ಒದಗಿಸುತ್ತದೆ. ನೀವು ಅರ್ಹತಾ ಮಾನದಂಡಗಳು ಇದ್ದರೆ, ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಲು ಮುಂದಾಗಿ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.
All the Best! 🎯✨
ಈ ಮಾಹಿತಿಯು ಉಪಯುಕ್ತವೆನಿಸಿದರೆ, ನಿಮ್ಮ ಸ್ನೇಹಿತರು ಮತ್ತು ಸಹ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಿ. 🔄
1. BNPM ನೇಮಕಾತಿ 2026ಗೆ ಕೊನೆಯ ದಿನಾಂಕ ಯಾವುದು?
👉 BNPM ನೇಮಕಾತಿ 2026ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 11 ಏಪ್ರಿಲ್ 2026 (ಸಂಜೆ 5 ಗಂಟೆ) ಆಗಿದೆ.
BNPM Recruitment 2026 ನಲ್ಲಿ ಎಷ್ಟು ಹುದ್ದೆಗಳು ಇವೆ?
👉 ಒಟ್ಟು 6 ಹುದ್ದೆಗಳು ಲಭ್ಯವಿದ್ದು, ವಿವಿಧ Assistant Manager ಹುದ್ದೆಗಳು ಸೇರಿವೆ.
BNPM ಹುದ್ದೆಗಳಿಗೆ ಅರ್ಜಿ ಹಾಕಲು ಅನುಭವ ಅಗತ್ಯವಿದೆಯೇ?
👉 ಇಲ್ಲ, ಈ ನೇಮಕಾತಿಗೆ ಯಾವುದೇ ಅನುಭವ ಅಗತ್ಯವಿಲ್ಲ. Freshers ಕೂಡ ಅರ್ಜಿ ಹಾಕಬಹುದು.
BNPM Assistant Manager ವೇತನ ಎಷ್ಟು?
👉 BNPM Assistant Manager ಹುದ್ದೆಗೆ ಪ್ರಾರಂಭಿಕ ವೇತನ ₹52,000 ಪ್ರತಿ ತಿಂಗಳು ಹಾಗೂ ಇತರ ಭತ್ಯೆಗಳು ದೊರೆಯುತ್ತವೆ.
BNPM ನೇಮಕಾತಿಗೆ ಅರ್ಜಿ ಹೇಗೆ ಸಲ್ಲಿಸಬೇಕು?
👉 ಅರ್ಜಿ ಆಫ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಅರ್ಜಿ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಮೈಸೂರಿನ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು.
BNPM Recruitment 2026ಗೆ ವಯೋಮಿತಿ ಎಷ್ಟು?
👉 ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷ ಇರಬೇಕು. ಸರ್ಕಾರದ ನಿಯಮಗಳಂತೆ ವಯೋಮಿತಿ ಸಡಿಲಿಕೆ ದೊರೆಯುತ್ತದೆ.
BNPM ಪರೀಕ್ಷೆಯ ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ?
👉 ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಲಿಖಿತ ಪರೀಕ್ಷೆ (Online/Offline) ಮತ್ತು ನಂತರ ಸಂದರ್ಶನ (Interview) ಇರುತ್ತದೆ.
Read More:
SSB ನೇಮಕಾತಿ 2026: ಆಯ್ಕೆ ಪ್ರಕ್ರಿಯೆ, ವಯೋಮಿತಿ, ಅರ್ಜಿ ಶುಲ್ಕ, PST & Written Exam ಸಂಪೂರ್ಣ ಮಾಹಿತಿ
ಕರ್ನಾಟಕ ಹೈಕೋರ್ಟ್ ನೇಮಕಾತಿ 2026 : ಅಸಿಸ್ಟೆಂಟ್ ಕೋರ್ಟ್ ಸೆಕ್ರಟರಿ ಹುದ್ದೆಗಳ ಸಂಪೂರ್ಣ ಮಾಹಿತಿ
Census 2027 Kannada : ಶಿಕ್ಷಕರಿಗೆ ಗಣತಿ ಡ್ಯೂಟಿ ವಿನಾಯತಿ! ಯಾರು ಅರ್ಹರು? ಹೇಗೆ ಅರ್ಜಿ ಹಾಕುವುದು?
ಜನಗಣತಿ 2027 – ಮನೆಪಟ್ಟಿ ಕಾರ್ಯಚರಣೆ ಸಂಪೂರ್ಣ ಮಾರ್ಗದರ್ಶಿ | Census House Listing App ಬಳಕೆ ವಿಧಾನ

