Sashastra Seema Bal (SSB ನೇಮಕಾತಿ 2026) ವತಿಯಿಂದ SSB Head Constable Recruitment 2026ಗಾಗಿ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ. ನೀವು ಈ ಹುದ್ದೆಗೆ ಅರ್ಜಿ ಹಾಕುತ್ತಿದ್ದರೆ, ಈ ಲೇಖನವನ್ನು ಓದಿ. ಈ ನೇಮಕಾತಿಯಲ್ಲಿಒಟ್ಟು 233 ಹುದ್ದೆಗಳು ಇದ್ದು, ಆಸಕ್ತ ಅಭ್ಯರ್ಥಿಗಳು 21 ಮಾರ್ಚ್ 2026 ರಿಂದ 20 ಏಪ್ರಿಲ್ 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೂ ಈ ಲೇಖನದಲ್ಲಿಅರ್ಜಿ ದಿನಾಂಕ, ಅರ್ಹತೆ, ಆಯ್ಕೆಯ ಪ್ರಕ್ರಿಯೆ, ವಯೋಮಿತಿ, ವೇತನ ಮತ್ತು ಅನರ್ಹತೆ ಹಾಗೂ ಅರ್ಜಿ ಶುಲ್ಕದ ಬಗ್ಗೆ ಸರಳವಾಗಿ ವಿವರಿಸಿದ್ದೇನೆ.
📅SSB ನೇಮಕಾತಿ 2026ರ ಪ್ರಮುಖ ದಿನಾಂಕಗಳು (Important Dates)
SSB Head Constable ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
ಅಧಿಸೂಚನೆ ಪ್ರಕಟಣೆ: ಮಾರ್ಚ್ 2026
ಅರ್ಜಿ ಪ್ರಾರಂಭ ದಿನಾಂಕ: 21 ಮಾರ್ಚ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಏಪ್ರಿಲ್ 2026
ಶುಲ್ಕ ಪಾವತಿ ಕೊನೆಯ ದಿನಾಂಕ: 20 ಏಪ್ರಿಲ್ 2026
Admit Card: ನಂತರ ತಿಳಿಸಲಾಗುವುದು
ಪರೀಕ್ಷಾ ದಿನಾಂಕ: ನಂತರ ಪ್ರಕಟಿಸಲಾಗುವುದು
ಫಲಿತಾಂಶ: ನಂತರ ಪ್ರಕಟಿಸಲಾಗುವುದು
👉 ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕು.
Official Link : https://ssb.gov.in/
FOR ONLINE APPLICATION LINK BELOW

📌SSB ನೇಮಕಾತಿ 2026ರ ಹುದ್ದೆಗಳ ವಿವರ (Total 233 Posts)
ಈ ನೇಮಕಾತಿಯಲ್ಲಿ ಒಟ್ಟು 233 ಹುದ್ದೆಗಳಿದ್ದು, ಈ ಕೆಳಗಿನ ವಿವಿಧ ಹುದ್ದೆಗಳಿಗೆ ಸೇರಿವೆ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| Head Constable (Steward) | 02 |
| Head Constable (Communication) | 197 |
| Head Constable (Electrician) | 29 |
| Constable (Veterinary) | 05 |
| ಒಟ್ಟು | 233 |
🎓 ಅರ್ಹತೆ (Eligibility Details)
✔️ Steward : ಈ ಹುದ್ದೆಗೆ 12ನೇ ತರಗತಿ ಪಾಸ್ ಆಗಿರಬೇಕು ಮತ್ತುCatering & Kitchen Management ನಲ್ಲಿ ಡಿಪ್ಲೊಮಾ ಹಾಗೂ1 ವರ್ಷದ ಅನುಭವ ಇರಬೇಕು
✔️ Communication : 12ನೇ ತರಗತಿ (PCM) ಮತ್ತುElectronics / Communication / IT / Computer Science ನಲ್ಲಿ 03 Years ಡಿಪ್ಲೊಮಾ ಮಾಡಿರಬೇಕು.
✔️ Electrician: 10ನೇ ತರಗತಿ ಪಾಸ್ + ಅನುಭವ ಅಥವಾ ITI (Electrician Trade)
✔️ Veterinary: 12ನೇ ತರಗತಿ (Science) ಹಾಗೂ Veterinary / Animal Husbandry ಡಿಪ್ಲೊಮಾ ಮತ್ತು ಅನುಭವ.
🎯 ವಯೋಮಿತಿ (Age Limit – 20.04.2026ಕ್ಕೆ)
| Electrician | 18 ರಿಂದ 25 ವರ್ಷ |
| ಇತರೆ ಹುದ್ದೆಗಳು | 18 ರಿಂದ 27 ವರ್ಷ |
✔️ ವಯೋ ಸಡಿಲಿಕೆ( Age relaxation):
| SC/ST | 5 ವರ್ಷ |
| OBC | 3 ವರ್ಷ |
| Ex Serviceman | 3 ವರ್ಷ |
ಇನ್ನಷ್ಟು ವಿವರಗಳು ತಿಳಿದುಕೊಳ್ಳಲು ಮತ್ತು ಮತ್ತಷ್ಟು Age relaxation ಬಯಸುವವರು , SSB ಹೆಡ್ ಕಾನ್ಸ್‌ಟೇಬಲ್ 2026 ಅಧಿಕೃತ ಅಧಿಸೂಚನೆಯನ್ನು ತಪ್ಪದೇ ಓದಿರಿ.
💰SSB ನೇಮಕಾತಿ 2026ರ ಅರ್ಜಿ ಶುಲ್ಕ (Application Fee)
| General / OBC / EWS | ₹100 |
| SC / ST / Ex-servicemen | Fee ಇರುವುದಿಲ್ಲ |
| ಮಹಿಳಾ ಅಭ್ಯರ್ಥಿಗಳು | Fee ಇರುವುದಿಲ್ಲ |
👉 ಪಾವತಿ ವಿಧಾನ: ಪರೀಕ್ಷಾ ಶುಲ್ಕವನ್ನು ನೀವು Credit Card, Debit card, Net Banking ಅಥವಾ E-Challan ಮೂಲಕ ಸುಲಭವಾಗಿ ಪಾವತಿಸಬಹುದು.
🪖SSB ನೇಮಕಾತಿ 2026ರ ಆಯ್ಕೆ ಪ್ರಕ್ರಿಯೆ (Selection Process)
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಹಲವು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:

1️⃣ PET & PST (ಶಾರೀರಿಕ ಪರೀಕ್ಷೆ)
📏 ಎತ್ತರ (Height)
| ವರ್ಗ | ಪುರುಷರು | ಮಹಿಳೆಯರು |
| ಸಾಮಾನ್ಯ | 165 ಸೆಂ.ಮೀ | 155 ಸೆಂ.ಮೀ |
ಕೆಲವೊಂದು ಸಮುದಾಯಗಳಿಗೆ (Garhwalis, Kumaonis, Gorkhas, Dogras, Marathas) ಎತ್ತರ ಸಡಿಲಿಕೆ (Height relaxation) ದೊರೆಯಬಹುದು. ಹೆಚ್ಚಿನ ಹಾಗೂ ಸಂಪೂರ್ಣ ಮಾಹಿತಿಗಾಗಿ, ದಯವಿಟ್ಟು SSB ಹೆಡ್ ಕಾನ್ಸ್‌ಟೇಬಲ್ ನೇಮಕಾತಿ ಅಧಿಸೂಚನೆ 2026 ಅನ್ನು ಓದಿರಿ.
Chest (ಪುರುಷರಿಗೆ ಮಾತ್ರ)
77 ಸೆಂ.ಮೀ (Normal)
82 ಸೆಂ.ಮೀ (Expanded)
SSB Physical Standard Test (PST) ನಲ್ಲಿ Chest Expansion ಕನಿಷ್ಠ 5 ಸೆಂ.ಮೀ ಕಡ್ಡಾಯವಾಗಿದೆ

✔️ ತೂಕ (Weight)
ನಿಮ್ಮ ಎತ್ತರಕ್ಕೆ ಅನುಗುಣವಾಗಿರಬೇಕು
🏃 PET (Physical Test)
| ಲಿಂಗ | ದೂರ | ಸಮಯ |
| ಪುರುಷರು | 1.6 ಕಿ.ಮೀ | 6.5 ನಿಮಿಷ |
| ಮಹಿಳೆಯರು | 800 ಮೀ | 4 ನಿಮಿಷ |
👉 ಪುರುಷರು 1.6 ಕಿ.ಮೀ ಓಟವನ್ನು 6 ನಿಮಿಷ 30 ಸೆಕೆಂಡ್‌ಗಳಲ್ಲಿ ಮುಗಿಸಬೇಕು.
👉 ಮಹಿಳೆಯರು 800 ಮೀಟರ್ ಓಟವನ್ನು ನಾಲ್ಕು ನಿಮಿಷಗಳಲ್ಲಿ ಮುಗಿಸಬೇಕು.
👉 ನಾವು ಈ ಹಂತದ ಪರೀಕ್ಷೆಯಲ್ಲಿ ಸಮಯವನ್ನು ನಿರ್ವಹಿಸಬೇಕು.
👉 Long Jump, High Jump ಕೂಡ ಇರುತ್ತದೆ
2️⃣ ಲಿಖಿತ ಪರೀಕ್ಷೆ (Written Exam)
PET & PST ಯಲ್ಲಿ ಯಾರೆಲ್ಲಾ ಪಾಸ್ ಆಗಿರುತ್ತಾರೆ. ಅವರೆಲ್ಲಾ ಲಿಖಿತ ಪರೀಕ್ಷೆ ಬರೆಯಬೇಕು
Objective ಪ್ರಶ್ನೆಗಳು ಇರುವ Part 1 (50 ಅಂಕಗಳು) ಮತ್ತು Part 2 (100ಅಂಕಗಳು)
| Part 1ಗೆ (50 ಅಂಕಗಳು) | ಸಾಮಾನ್ಯ ಜ್ಞಾನ ಗಣಿತ Reasoning ಸಾಮಾನ್ಯ ಇಂಗ್ಲಿಷ್ / ಹಿಂದಿ |
| Part 2ಗೆ (100ಅಂಕಗಳು) | ತಾಂತ್ರಿಕ ವಿಷಯ |
3️⃣ Skill Test
👉 Electrician ಹುದ್ದೆಗೆ ಮಾತ್ರ ಅನ್ವಯಿಸುತ್ತದೆ
4️⃣ ವೈದ್ಯಕೀಯ ಪರೀಕ್ಷೆ (Medical Test)
PET & PST , ಲಿಖಿತ ಪರೀಕ್ಷೆ ಮತ್ತುSkill Testಯಾರೆಲ್ಲಾ ಪಾಸ್ ಆಗಿರುತ್ತಾರೆ. ಅವರೆಲ್ಲಾ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಇಲ್ಲಿ ಕಣ್ಣು, ಕಿವಿ, ದೇಹದ ಆರೋಗ್ಯ ಪರೀಕ್ಷೆ ಮಾಡಲಾಗುತ್ತದೆ
5️⃣ ದಾಖಲೆ ಪರಿಶೀಲನೆ (Document Verification)
ಎಲ್ಲಾ ಮೂಲ ಪ್ರಮಾಣಪತ್ರಗಳು ಪರಿಶೀಲನೆ. ದಾಖಲೆಗಳನ್ನು ತಪ್ಪಿದ್ದಲ್ಲಿ ಅಥವಾ ದಾಖಲಾತಿಗಳನ್ನು ಒದಗಿಸದ್ದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಅನರ್ಹರಾಗುತ್ತಾರೆ
6️⃣ ಅಂತಿಮ ಆಯ್ಕೆ ಪಟ್ಟಿ (Final Merit List)
ಮೇಲಿನ ಎಲ್ಲಾ ಪರೀಕ್ಷೆಗಳಲ್ಲೂ ಪಾಸಾದಂತಹ ಹಾಗೂ ಎಲ್ಲಾ ಹಂತಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಈ ಅಂತಿಮ ಆಯ್ಕೆ ಪಟ್ಟಿಯಲ್ಲಿ ನೀಡುತ್ತಾರೆ.
💵 ವೇತನ (Salary Details)
₹25,500 ರಿಂದ ₹81,100 / ತಿಂಗಳು
| Pay Scale | Level – 4 |
| Allowances | DA HRA TA Medical Benefits |
👉 ಒಟ್ಟು ವೇತನ ಸುಮಾರು ₹30,000 – ₹35,000+

ಸಮಾರೋಪ (Conclusion)
SSB Head Constable Recruitment 2026 ಒಂದು ಉತ್ತಮ ಅವಕಾಶವಾಗಿದ್ದು, ಸರ್ಕಾರದ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಇದು ದೊಡ್ಡ ಅವಕಾಶವಾಗಿದೆ. ಹಾಗೂ ಒಂದು ಉತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. ಆದರೆ ಆಯ್ಕೆ ಪ್ರಕ್ರಿಯೆ ಕಠಿಣವಾಗಿದೆ.
ಈ ಹುದ್ದೆಗೆ ಆಯ್ಕೆಯಾಗಲು ಬಯಸುವವರು:
👉ದೈಹಿಕವಾಗಿ ಸಿದ್ಧರಾಗಿರಿ
👉ಲಿಖಿತ ಪರೀಕ್ಷೆಗೆ ತಯಾರಿ ಮಾಡಿ
👉ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಡಿ
👉ಅರ್ಜಿ ತುಂಬುವಾಗ ಎಚ್ಚರಿಕೆಯಿಂದ ಹಾಕಿ
👉 ಪ್ರತಿಯೊಂದು ಹಂತವೂ ಮುಖ್ಯವಾಗಿರುವುದರಿಂದ ಪೂರ್ಣ ತಯಾರಿ ಅತ್ಯಗತ್ಯ.
👉 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 20 ಏಪ್ರಿಲ್ 2026
FOR APPLY CLICK HERE |
Read more:
ಕರ್ನಾಟಕ ಹೈಕೋರ್ಟ್ ನೇಮಕಾತಿ 2026 : ಅಸಿಸ್ಟೆಂಟ್ ಕೋರ್ಟ್ ಸೆಕ್ರಟರಿ ಹುದ್ದೆಗಳ ಸಂಪೂರ್ಣ ಮಾಹಿತಿ
ಜನಗಣತಿ 2027 – ಮನೆಪಟ್ಟಿ ಕಾರ್ಯಚರಣೆ ಸಂಪೂರ್ಣ ಮಾರ್ಗದರ್ಶಿ | Census House Listing App ಬಳಕೆ ವಿಧಾನ
Census 2027 Kannada : ಶಿಕ್ಷಕರಿಗೆ ಗಣತಿ ಡ್ಯೂಟಿ ವಿನಾಯತಿ! ಯಾರು ಅರ್ಹರು? ಹೇಗೆ ಅರ್ಜಿ ಹಾಕುವುದು?
₹10 ಲಕ್ಷ Personal Loan ಬೇಗ ಮುಗಿಸುವ 3 ವಿಧಾನಗಳು – EMI, Extra Payment, Part Payment ಸಂಪೂರ್ಣ ಲೆಕ್ಕ
ಜನಗಣತಿ ಕೆಲಸ ಮಾಡದಿದ್ದರೆ ಏನು ಆಗುತ್ತದೆ? ಸರ್ಕಾರಿ ನೌಕರರು ತಿಳಿಯಲೇಬೇಕಾದ ಮುಖ್ಯ ನಿಯಮಗಳು
ಜನಗಣತಿ ಸಿಬ್ಬಂದಿಗಳಿಗೆ ಗೌರವಧನ – ಹೊಸ ಸರ್ಕ್ಯುಲರ್ ಸಂಪೂರ್ಣ ಮಾಹಿತಿ(ವೈರಲ್ ಆಗುತ್ತಿರುವ ಸುದ್ದಿ)






